`ಮಿ|| ಮೊಮ್ಮಗ ನ ಯುಗಳ ಗೀತೆ
Posted date: 07 Thu, Apr 2016 – 10:29:39 AM

ಸುಮುಖ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ ಮಿ||ಮೊಮ್ಮಗ ಚಿತ್ರಕ್ಕೆ ವಾರ ವಾರ ಭಾನುವಾರ ನಾನು ನಿನ್ನ ಕಂಡೆ, ವಾರ ವಾರ ಸೋಮವಾರ ನಿನ್ನ ಮೆಚ್ಚಿಕೊಂಡೆ, ಮಂಗಳವಾರ ನಿನ್ನ ಮಿಸ್ ಮಾಡಿಕೊಂಡೆ, ಬುಧವಾರ ನಿನ್ನ ಪ್ರೀತಿ ಮಾಡಿಕೊಂಡೆ, ಗುರುವಾರ ಶುಕ್ರವಾರ ಶನಿವಾರ ನಿನ್ನ ತಬ್ಬಿಕೊಂಡೆ... ಈ ಹಾಡಿನ ಚಿತ್ರೀಕರಣ ಹಾಸನ, ಸಕಲೇಶಪುರ ಗೊರೂರು ಡ್ಯಾಂ ಬಳಿ ಹೆಸರಾಂತ ನೃತ್ಯ ನಿರ್ದೇಶನ - ದಿನೇಶ್‌ರವರ ನೇತೃತ್ವದಲ್ಲಿ ನಡೆಯಿತು. ಈ ಚಿತ್ರ ತಾತ ಮತ್ತು  ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ಮಂಜಾಪೈ ಚಿತ್ರದ ರೀಮೇಕ್.  ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಸಾಹಿತ್ಯ- ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಸಂಗೀತ-ರಘುನಂದನ್, ಸಂಕಲನ - ದೇವ ರಾಘವನ್, ಕಲೆ-ಸೋಮಶೇಖರ್, ಸಾಹಸ - ಶಿವು, ನೃತ್ಯ-ದಿನೇಶ್, ಸಹನಿರ್ದೇಶನ-ನವರಸನ್, ನಿರ್ವಹಣೆ - ದಾಡಿ ರಮೇಶ್, ತಾರಾಗಣದಲ್ಲಿ - ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed